ಅನಸೂಯಾ ರಾಮರೆಡ್ಡಿಯವರು ಕಾದಂಬರಿಕಾರ್ತಿ. ಇವರು ೧೯೨೯ರ ಡಿಸೆಂಬರ್ ೨೫ರಂದು ಚಿತ್ರದುರ್ಗದ ತುರುವನೂರು ಎಂಬಲ್ಲಿ ಜನಿಸಿದರು. ಇವರ ತಂದೆ ಎಂ. ರಾಮರೆಡ್ಡಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ತಾಯಿ ಮಂಗಳಮ್ಮ. ಬೆಳೆಗೆರೆ ಚಂದ್ರಶೇಖರ ಶಾಸ್ತ್ರಿಗಳು ಇವರ ಗುರುಗಳು. ಮಹಿಳಾ ಸಮಸ್ಯೆಗಳನ್ನು ಪ್ರಮುಖವಾಗಿಟ್ಟು ಕೊಂಡು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಬರೆದ ಕಾದಂಬರಿಗಳೆ ಹೆಚ್ಚಾಗಿವೆ. == ಕೃತಿಗಳು == === ಕಾದಂಬರಿ === ಮೂರು ದಾರಿ ಮಮತೆಯ ಮಡಿಲು ಮಂದಾನಿಲ ಕುಲದೀಪಕ ಒಡೆದ ಹಾಲು ಇದಿರುಗಾಳಿ ಪಂಜರ ಪ್ರತೀಕ್ಷೆ ಮಡಿಲ ಮೊಗ್ಗು ಈಚಲು ವನ ಹರಿಗೋಲು ತೆರೆಗಳು ಬೆಳಕಿನ ಬಳ್ಳಿ === ಕಥಾಸಂಕಲನ === ದಾರಿ ತೊರಿದ ದೇವಿಯರು ಮತ್ತು ಇತರ ಕಥೆಗಳು ಬಂದಿಯ ಬಿಡುಗಡೆ ಮತ್ತು ಇತರ ಕಥೆಗಳು === ನಾಟಕ === ಮನೆಗೆ ಮೂರು ಮಾಣಿಕ್ಯ === ಜೀವನ ಚರಿತ್ರೆ === ಗುರು ಗೋವಿಂದಸಿಂಹ == ಪ್ರಶಸ್ತಿ, ಗೌರವ == ಪಂಜರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ದೊರೆತಿದೆ. == ಉಲ್ಲೇಖ ==